Exclusive Academy for Coaching Police Sub-Inspector (PSI) Aspirantsಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್ಐ) ಆಕಾಂಕ್ಷಿಗಳ ತರಬೇತಿಯ ಏಕಮಾತ್ರ ಅಕಾಡೆಮಿ

 • ವೈಯಕ್ತಿಕ ಗಮನ ಮತ್ತು ಸಮಾಲೋಚನೆ.
 • ಸಂಶೋಧನಾಸಂಪನ್ನ ಪಠ್ಯಕ್ರಮ.
 • ವೃತ್ತಿಪರವೂ ಹಾಗೂ ಉದ್ದೇಶಯುತವೂ ಆದ ವಿಧಾನ.
 • ಅನುಭವಿ ಅಧ್ಯಾಪಕವೃಂದ.
 • ವಿಷಯ ತಜ್ಞರಿಂದ ಅಧಿವೇಶನ.
 • ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ.
 • ಸರಳ ಕೌಶಲ್ಯ ತರಬೇತಿ.
 • ನಿಯತಕಾಲಿಕ ನಿರ್ವಹಣಾ ಪರಿಶೀಲನೆ.
 • ಪರಮೋತ್ಕೃಷ್ಟ ಸೌಲಭ್ಯ.
 • Individual Attention and counselling.
 • Well Researched curriculum.
 • Professional and Targeted Approach.
 • Experienced Faculty.
 • Sessions by Experts.
 • Sessions on Personality Development.
 • Soft Skills Training.
 • Periodical Performance Review.
 • State of the Art facility.

Aboutನಮ್ಮ ಬಗ್ಗೆ

            ಕೌಶಲ್ಯ ಮತ್ತು ಸಬಲೀಕರಣಗಳಿಗೆ ಮೀಸಲಾದ ಅಕಾಡೆಮಿಯು ಕರ್ನಾಟಕ ರಾಜ್ಯದಲ್ಲಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಕಾಂಕ್ಷಿಗಳಿಗೆ ಶಿಕ್ಷಣ ನೀಡಿ ಅವರನ್ನು ಸಿದ್ಧಗೊಳಿಸುವ ವಿಶಿಷ್ಟ ಕೇಂದ್ರ. ಈ ಅಕಾಡೆಮಿಯು, ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಅಗತ್ಯತೆಗಳ ಬಗ್ಗೆಯೂ, ಸಬ್ ಇನ್ಸ್‌ಪೆಕ್ಟರ್ ಆಯ್ಕೆ ಪ್ರಕ್ರಿಯೆಯ ಬಗ್ಗೆಯೂ ಕೂಲಂಕಷ ತಿಳಿದಿರುವ ನಿವೃತ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಕನಸಿನ ಕೂಸಷ್ಟೆ ಅಲ್ಲ, ಅವರ ವಿಶೇಷ ಒಲವಿನ ಸಾಕಾರವೂ ಹೌದು.

         ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ತರುಣ ಆಕಾಂಕ್ಷಿಗಳ ಆಯ್ಕೆ ತಪ್ಪದೆ ಯಶಸ್ವಿಯಾಗುವಂತೆ ಈ ತರಬೇತಿಯನ್ನು ಕಲ್ಪಿಸಿ, ರೂಪಿಸಿ, ಅಭಿವೃದ್ಧಿ ಪಡಿಸಿದವರು ಮಾಜಿ ಐಪಿಎಸ್ ಅಧಿಕಾರಿ ಹಾಗೂ ಅವರ ಪ್ರತಿಭಾವಂತ ಪರಿಣಿತ ತಂಡ.

        ಈ ಹುದ್ದೆಗೆ ಕೇಳಿಬಂದಂತ ಅದೆಷ್ಟೊ ಸಮರ್ಥ ಆಕಾಂಕ್ಷಿಗಳು ಸೂಕ್ತ ಮಾರ್ಗದರ್ಶನ ಮತ್ತು ಸಜ್ಜನಗೊಳಿಸುವಿಕೆಗಳ ಕೊರತೆಯಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಎಡವುದನ್ನು ನೋಡಿ, ಅಂತವುದಕ್ಕೆ ಅವಕಾಶ ಆಗದಿರಲೆಂಬ ಸಾಮಾಜಿಕ ಕಾಳಜಿಯಿಂದ ಅಭಿಪ್ರೇರಿತವಾದ ಪ್ರಯತ್ನದ ಫಲವೇ ಈ ಯೋಜನೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿ ಇರುವ ತಜ್ಞ ಹಾಗೂ ಯುವ ಸಲಹಾಗಾರರೂ, ವೃತ್ತಿಪರ ಸಂಶೋಧಕರೂ ಈ ಅಕಾಡೆಮಿಯ ಬೆಂಬಲಕ್ಕಿದ್ದಾರೆಂಬುದೇ ಇದರ ಹಿರಿಮೆ.

           S Academy for Skills and Empowerment is a specialized center for coaching Police Sub Inspector aspirants in Karnataka State. The Academy is the brain child and passion of a Retired Senior IPS officer having a thorough knowledge of the process of selection of Sub Inspectors and requirements of the job profile.

          The course has been conceptualized, designed and developed by an Ex-IPS officer and his team of brilliant professionals to enable young aspirants to crack the selection and is a sure shot success. This endeavour is motivated by a social concern of having seen many bright aspirants who would have been perfect fits for the jobs miss the selection due to sheer lack of guidance and proper grooming. The Academy is backed by Senior Consultants in respective fields and young professionals who have done painstaking research.

Courseಕೋರ್ಸ್

          ಈ ಅಕಾಡೆಮಿಯು ಪ್ರಧಾನವಾಗಿ ಸೂಕ್ತ ತಿಳಿವು, ಶಿಸ್ತು ಹಾಗೂ ಮೃದು ಕೌಶಲ್ಯಗಳನ್ನು ಶಿಕ್ಷಣಾರ್ಥಿಗಳ ಮನದಲ್ಲಿ ನೆಲೆಗೊಳಿಸಿ ಅವರ ಶಿಕ್ಷಣ ಮತ್ತು ಉದ್ಯೋಗಾರ್ಹತೆಗಳ ನಡುವಣ ತೆರಪನ್ನು ಭರ್ತಿ ಮಾಡುವ ಉದ್ದೇಶವನ್ನು ಹೊಂದಿದೆ. ಈ ತರಬೇತಿಯಲ್ಲಿ ಭಾಗವಹಿಸುವ ಎಲ್ಲರಲ್ಲೂ ಸಂಭಾವ್ಯ ಪರೀಕ್ಷೆಯ ಎಲ್ಲೆಯೊಳಗಿನ ಉದ್ದೇಶಿತ ಆಯ್ದ ವಿಷಯಗಳನ್ನು ಚೆನ್ನಾಗಿ ಕಲಿಯುವಂತೆ ತರಬೇತುಗೊಳಿಸುವುದೇ ಈ ಅಕಾಡೆಮಿಯ ಪ್ರಧಾನ ಲಕ್ಷ್ಯ.

          ಪ್ರಸ್ತುತ ಅವಶ್ಯಕತೆಗಳಿಗನುಸಾರವಾಗಿ ಕಲಿತ ವಿದ್ಯೆಯ ಪುನಶ್ಚೇತನ ಮತ್ತು ಅಪೇಕ್ಷಿತ ವೃತ್ತಿಧರ್ಮದ ಪುನರ್ನವೀಕರಣಗಳು ಅಕಾಡೆಮಿಯಲ್ಲಿ ಜರುಗುತ್ತಲೇ ಇದ್ದು, ಭವಿಷ್ಯದ ಪಂಥಾಹ್ವಾನಗಳನ್ನೆದುರಿಸುವಲ್ಲಿ ಅವು ಅಭ್ಯರ್ಥಿಗಳನ್ನು ಸಜ್ಜುಗೊಳಿಸುತ್ತದೆ, ಅಭ್ಯರ್ಥಿಗಳ ಆತ್ಮವಿಶ್ವಾಸವನ್ನು ಪೋಷಿಸಿ, ನಾಯಕತ್ವದ ಗುಣವನ್ನು ಅವರಲ್ಲಿ ಬೆಳೆಸಿ, ಸಂವಹನ ಕೌಶಲ್ಯಗಳನ್ನು ಅವರಲ್ಲಿ ಸಂವರ್ಧಿಸಿ, ಮುಂಬರುವ ಪರೀಕ್ಷೆಯಲ್ಲಿ ಮಾತ್ರ ಅಲ್ಲ, ನಾಳಿನ ಜೀವನದಲ್ಲೂ ಅದ್ಭುತ ಯಶಸ್ಸನ್ನುಗಳಿಸುವಂತೆ ಮಾಡುವಲ್ಲಿ ಅಕಾಡೆಮಿಯು ಶ್ರಮಿಸುತ್ತದೆ.

          ಪ್ರತಿಯೊಬ್ಬ ಅಭ್ಯರ್ಥಿಯ ಕಡೆಗೆ ಹರಿಸುವ ವೈಯಕ್ತಿಕ ಗಮನವು ಅವರಲ್ಲಿ ಹುದುಗಿರುವ ಸತ್ವ-ಸಾಮರ್ಥ್ಯವನ್ನು ಹೊರಗೆಡಹುವುದರೊಂದಿಗೆ, ಅವರ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವಂತೆಯೂ ಮಾಡುತ್ತದೆ. ಅನನ್ಯವಾದ ಬೋಧನಾ ಕ್ರಮ, ಸಂಶೋಧನಾಸಂಪನ್ನ ಕಲಿಕಾ ಸಾಮಗ್ರಿಗಳು ಮತ್ತು ಅನುಭವಿಗಳಾದ ವಿಷಯ ತಜ್ಞರೆಲ್ಲರೂ ಈ ತರಬೇತಿ ಪರಿಪೂರ್ಣ ಯಶಸ್ಸಿನ ಬುತ್ತಿಯನ್ನಾಗಿ ಮಾಡಿದ್ದಾರೆ. ಇಲ್ಲಿ ಮೈಗೂಡಿಸಿಕೊಂಡ ಕೌಶಲ್ಯಗಳು ವ್ಯಕ್ತಿತ್ವ ವಿಕಾಸನಗೈಯುವುದರೊಂದಿಗೆ, ಅಭ್ಯರ್ಥಿಯ ಭವಿಷ್ಯದ ಜೀವನೋಪಾಯದ ಹಾದಿಯನ್ನು ರೂಪಿಸಲಿವೆ. ಉದಾತ್ತ ಉದ್ದೇಶ ಬದ್ಧ ಅತಿಥಿ ಉಪನ್ಯಾಸಕರುಗಳ ಸರಮಾಲೆಯು ಅವರವರ ಕ್ಷೇತ್ರಗಳಲ್ಲಿನ ಸಾಧನೆಯ ಶಿಖರಪ್ರಾಯವಾಗಿದ್ಧು, ಅವರವರ ಪ್ರಾವೀಣ್ಯವನ್ನು ಸಾರುವುದರೊಂದಿಗೆ ಅವು ಅಭ್ಯರ್ಥಿಗಳನ್ನು ಹೆಚ್ಚಿನ ಸಾಧನೆಗೂ ಅಭಿಪ್ರೇರಿಸಬಲ್ಲವಾಗಿರುತ್ತದೆ.

            The Academy principally bridges the gap between education and employability by inculcating the required domain knowledge, discipline and soft skills. The focus of the academy is to train participants in targeted study of topics carefully chosen to cover the probable contours of the examination. Re-orientation of learnt disciplines to suit the requirements and the honing of the desired attributes would go a long way in preparing the candidate for the future challenges which is dealt professionally in the academy.

            The academy specializes in building confidence and develop leadership qualities in the participants and equip them with communication skills to enable them to succeed in the examination and beyond that in the participant’s life. The personal attention bestowed to each candidate will bring out their natural strengths and help them work on their weaknesses. The unique teaching style, the well-researched learning material and qualified subject experts makes this course a complete success package.

            The learnt skills will ensure personality development and will go a long way in shaping the course of the participant’s career. The committed panel of guest lecturers are pinnacles of achievement in their field and will bring in their expertise and will go a long way motivating the participants for higher achievements.

Contact Usಸಂಪರ್ಕಿಸಿ

 • Address:ವಿಳಾಸ: ಎಸ್ ಆಯ್ಕೆ ಮ, ನೋ. 7, 5ನೇ ಮೇನ್, 5ನೇ ಬ್ಲಾಕ್, ಜಯನಗರ ಬೆಂಗಳೂರು, ಭಾರತS Academy, No. 7, 5th Main, 5th Block, Jayanagar, Bengaluru, India.
 • Phone:ದೂರವಾಣಿ:+91 9880016256
 • Email:ಇಮೇಲ್: contact@sacademyse.com
 • Website:ಜಾಲತಾಣ: www.sacademyse.com